ಸಿಂಪಿ ಲಿಂಗಣ್ಣನವರ ಮಾತಿನ ವೈಖರಿ
- lingannasimpi
- Feb 28, 2021
- 1 min read
Updated: Mar 18, 2021

ಸಿಂಪಿ ಲಿಂಗಣ್ಣನವರು ಪ್ರಬಂಧ, ಜೀವನ ವಿಮರ್ಶೆ, ವಿಡಂಬನೆ, ಹರಟೆ, ಕಾವ್ಯಗಳಲ್ಲಿ ವಿಶಿಷ್ಟ ಕೃತಿಗಳನ್ನು ರಚಿಸಿಯೂ 'ಜಾನಪದ ಸಾಹಿತಿ' ಎಂಬ ಹಣೆಚೀಟಿ!
ಪ್ರತಿಭಾಸಂಪನ್ನರಾದ ಅವರ ಸಾಹಿತ್ಯ ದೊಡ್ಡದು, ಅವರ ಪರಿಶುದ್ಧ ಜೀವನ ಅದಕ್ಕಿಂತ ದೊಡ್ಡದು. ಜನ ಸಾಮಾನ್ಯರೊಂದಿಗಿನ ತಮ್ಮ ಒಡನಾಟ, ಸಲುಗೆ ಮತ್ತು ಸ್ನೇಹಗಳಿಂದ ಜನರ ಹೃದಯ ಗೆದ್ದವರು. ಹುಟ್ಟಾ ರಸಿಕರಾದ ಅವರ ಮುಖದಲ್ಲಿ ಯಾವಾಗಲೂ ನಗೆ ತುಂಬಿ ತುಳುಕುತ್ತಿತ್ತು. 'ಗಜ್ಜರಿಯಂತೆ ತುಂಬಿದ ಮುಖ, ಮುಖದ ತುಂಬ ನಗೆ, ನಗೆಯಿಂದ ಸೂಸುವ ಮಲ್ಲಿಗೆ ಬೆಳಕು' . ಅವರ ಮಾತುಗಾರಿಕೆ ಅಪ್ರತಿಮವಾಗಿತ್ತು. ಅಲ್ಲಿ ಲೋಕಾನುಭವವಿತ್ತು, ಜಾನಪದ ಸೌರಭವಿತ್ತು. ಅದು ರಸಿಕತೆ, ವ್ಯಂಗ್ಯ, ಕೊಂಕು, ಕಟಕಿ, ಬೆಡಗು, ಪನ್ ಗಳಿಂದ ಸಮೃದ್ಧವಾಗಿರುತಿತ್ತು.
ಅವರ ಮಾತಿನ ವೈಖರಿಯ ಕೆಲವು ನಮೂನೆಗಳು
ಸ್ನೇಹಿತರು - ನಿಮ್ಮ ಹಲ್ಲುಗಳು ಗಟ್ಟಿಮುಟ್ಟಾಗಿವೆ, ಇನ್ನೂ ಬಿದ್ದಂತಿಲ್ಲ.
ಲಿಂಗಣ್ಣನವರು - ಹೌದು, ಬಿಳಿಸಿಕುಳ್ಳುವಂಥ ಕೆಲಸ ನಾನು ಮಾಡಿಲ್ಲ.
†*********†*******************
ಸ್ನೇಹಿತರು - ಮಾಸ್ತರೇ, ನಿಮ್ಮ ಮಗ (ಬಾವಿಯಿಂದ) ನೀರು ತರುತ್ತಾನೆಯೇ?
ಲಿಂಗಣ್ಣನವರು - ತರುತ್ತಾನೆ, ಕಣ್ಣಲ್ಲಿ!
******************************
ಮನೆಯೊಳಗೆ ನುಗ್ಗುತ್ತಿದ್ದ ನಾಯಿಯೊಂದನ್ನು 'ಹಚಾ' ಎಂದು ಹೊಡೆದೋಡಿಸುವ ಸಂದರ್ಭ, ಅದು ಹೋಗಲ್ಲೋಲದು. ಇದನ್ನು ಕಂಡು ಲಿಂಗಣ್ಣನವರು ಹೇಳಿದರು - "ಅದು ಗೌಡರ ನಾಯಿ, 'ಹಚಾರೀ' ಅಂದು ನೋಡು"
*******************************
ಪಾನನಿರೋಧ ಸಪ್ತಾಹದ ಅಂಗವಾಗಿ ನಡೆದ ಕಾರ್ಯಕ್ರಮದಲ್ಲಿ ಲಿಂಗಣ್ಣನವರು ಅತಿಥಿಗಳಾಗಿದ್ದರು.
ವೇದಿಕೆ ಮೇಲೆ ಅಧ್ಯಕ್ಷರು, ಗಣ್ಯರು, ಪುಡಾರಿಗಳು, ಮೊದಲಾದವರು ಆಸೀನರಾಗಿದ್ದರು. ಲಿಂಗಣ್ಣನವರು ತಮ್ಮ ಭಾಷಣ ಸರಧಿಯಲ್ಲಿ ಶೋತೃಗಳ ಕಡೆಗೊಮ್ಮೆ, ವೇದಿಕೆ ಕಡೆಗೊಮ್ಮೆ ನೋಡುತ್ತಾ ಹೇಳಿದರು - "ಕುಡಿಯಬೇಡಿರೆಂದು ಯಾರ ಕಡೆಗೆ ಮುಖಮಾಡಿ ಹೇಳಬೇಕೋ ತಿಳಿಯದಾಗಿದೆ"
*********************************
ಸ್ನೇಹಿತರು - ಏನು ಮಾಸ್ತರೇ, ನಿನ್ನೆ ನೋಡಿದ ನಾಟಕದಲ್ಲಿ ಹೆಣ್ಣ ಸೋಂಗ್ (ಪಾತ್ರ) ಹ್ಯಾಂಗಿತ್ತು? ಲಿಂಗಣ್ಣನವರು - ಅದಕ್ಕೆ ('ಹೆಣ್ಣ' ಪದಕ್ಕೆ) ಒತ್ತು ಇರಲಿಲ್ಲ!!!
Comments