ಗೌರವ ಹಾಗೂ ಪ್ರಶಸ್ತಿಗಳು
Honours and Awards
-
1944 : ರಬಕವಿಯಲ್ಲಿ ಜರುಗಿದ 28ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಜಾನಪದಗೋಷ್ಠಿಯ ಅಧ್ಯಕ್ಷತೆ.
-
1956 : ‘ಸ್ವರ್ಗದೋಲೆಗಳು’ ಕೃತಿಗೆ ಮುಂಬೈ ಸರಕಾರದ ಬಹುಮಾನ.
-
1959 : 'ಗರತಿಯ ಬಾಳು' ಕೃತಿಗೆ ಮೈಸೂರು ಸರಕಾರದ ಬಹುಮಾನ.
-
1960 : ‘ಆದರ್ಶ ಶಿಕ್ಷಕ’ ರೆಂದು ರಾಷ್ಟ್ರಪತಿ ಡಾ|| ರಾಜೇಂದ್ರ ಪ್ರಸಾದರಿಂದ ಪ್ರಶಸ್ತಿ. ಪ್ರಶಸ್ತಿ ಪಡೆದ 'ಪ್ರಪ್ರಥಮ ಕನ್ನಡಿಗ'. ಬಿಜಾಪುರದಲ್ಲಿ ನಡೆದ ಸನ್ಮಾನ ಸಮಾರಂಭದಲ್ಲಿ 'ಆಧ್ಯಾತ್ಮ-ಸಾಹಿತ್ಯ-ಪ್ರವರ್ತಕ' ರೆಂದು ಮಾನಪತ್ರ.
-
1961 : 'ಜನಾಂಗದ ಜೀವಾಳ' ಕೃತಿಗೆ ಕರ್ನಾಟಕ ರಾಜ್ಯ ಸರಕಾರದ ಬಹುಮಾನ ಮತ್ತು ಪ್ರಶಸ್ತಿ
-
1966 : ಮೈಸೂರು ವಿಶ್ವವಿದ್ಯಾಲಯ ಏರ್ಪಡಿಸಿದ ಕನ್ನಡ ಲೇಖಕರ ಸಮ್ಮೇಳನದಲ್ಲಿ ಜನಪದ ಗೋಷ್ಠಿಯ ಅಧ್ಯಕ್ಷತೆ.
-
1968 : ಕರ್ನಾಟಕ ಸಾಹಿತ್ಯ ಅಕಾಡೆಮಿಯಿಂದ ವಿಶೇಷ ಪ್ರಶಸ್ತಿ ಮತ್ತು ಬಹುಮಾನ
-
1969 : ಮಂಗಳೂರಿನಲ್ಲಿ ಜರುಗಿದ 2ನೇಯ ಜನಪದ ಸಾಹಿತ್ಯ ಸಮ್ಮೇಳನದ ಅಧ್ಯಕ್ಷತೆ.
-
1972 : ಬಿಜಾಪುರ ಜಿಲ್ಲಾ ಪ್ರಥಮ ಸಾಹಿತ್ಯ ಸಮ್ಮೇಳನದಲ್ಲಿ ಸನ್ಮಾನ.
-
1974 : ಸೊಲ್ಲಾಪುರದಲ್ಲಿ ಜರುಗಿದ ಹೊರನಾಡ ಕನ್ನಡಿಗರ ಸಾಹಿತ್ಯ ಸಮ್ಮೇಳನದ ಅಧ್ಯಕ್ಷತೆ.
-
1976 : ಸಾಗರದಲ್ಲಿ ಜರುಗಿದ ರಾಜ್ಯ ಮಟ್ಟದ ಜನಪದ ಸಾಹಿತ್ಯ ಉತ್ಸವದಲ್ಲಿ ಮುಖ್ಯ ಅತಿಥಿಗಳಾಗಿ.
-
1977 : 'ನಾಟ್ಯಸಾಧನೆ' ಕೃತಿಗೆ ಕರ್ನಾಟಕ ರಾಜ್ಯ ಸಾಹಿತ್ಯಅಕಾಡೆಮಿಯ ಬಹುಮಾನ.
-
1979 : ಕರ್ನಾಟಕ ವಿಶ್ವವಿದ್ಯಾಲಯದ ಆರನೇಯ ಜನಪದ ಸಾಹಿತ್ಯ ಸಮ್ಮೇಳನ ದ ಅಧ್ಯಕ್ಷತೆ ಇಳಕಲ್ನಲ್ಲಿ.
-
1980 : ಜಮಖಂಡಿಯಲ್ಲಿ ಜರುಗಿದ ವಿಜಾಪುರಜಿಲ್ಲೆಯ 2ನೇಯ ಸಾಹಿತ್ಯ ಸಮ್ಮೇಳನದ ಅಧ್ಯಕ್ಷತೆ.
-
1980 : ಕರ್ನಾಟಕ ಜಾನಪದ ಟ್ರಸ್ಟಿನಿಂದ ಸನ್ಮಾನ.
-
1980 : ನೂರು ಗಡಿಗೆ ಒಂದು ಬಡಿಗೆ’ ಕೃತಿಗೆ ಕರ್ನಾಟಕ ರಾಜ್ಯ ಸಾಹಿತ್ಯ ಅಕಾಡೆಮಿಯ ಬಹುಮಾನ.
-
1988 : ಕರ್ನಾಟಕ ಜಾನಪದ ಅಕಾಡೆಮಿಯಿಂದ 'ಜಾನಪದ ತಜ್ಞ’ ರೆಂದು ಸನ್ಮಾನಿಸಲಾಯಿತು.
-
1989 : ಕನ್ನಡ ಶಕ್ತಿ ಕೇಂದ್ರದ ಪ್ರಥಮ ವಾರ್ಷಿಕಸಭೆಯು ಹೊಸಪೇಟೆಯಲ್ಲಿ ಜರುಗಿದಾಗ ಆ ಸಭೆಯ ಅಧ್ಯಕ್ಷತೆ.
-
1989 : ಗುಲಬರ್ಗಾ ವಿಶ್ವವಿದ್ಯಾನಿಲಯದಿಂದ ಗೌರವ ಡಾಕ್ಟರೇಟ್.
-
1990 : ಮುದ್ದೇಬಿಹಾಳದಲ್ಲಿ ನಡೆದ ಬಿಜಾಪುರ ಜಿಲ್ಲಾ 5ನೇ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಸನ್ಮಾನ
-
1990 : ಕನ್ನಡ ಸಾಹಿತ್ಯ ಪರಿಷತ್ತು ಬೆಂಗಳೂರು ಇವರಿಂದ 'ಗೌರವ ಸದಸ್ಯತ್ವ'.
-
1990 : ಕರ್ನಾಟಕ ರಾಜ್ಯ ಸರಕಾರದಿಂದ ಜಾನಪದಕ್ಷೇತ್ರದ ಸೇವೆಗಾಗಿ 'ರಾಜ್ಯೋತ್ಸವ ಪ್ರಶಸ್ತಿ'
-
1990 : ಡಾll ಎಂ.ಎನ್. ವಾಲಿಯವರು ಬರೆದ ಸಿಂಪಿ ಲಿಂಗಣ್ಣನವರ ಜೀವನ ಸಾಧನೆ ಕುರಿತ ಮಹಾಪ್ರಬಂಧದ ಪ್ರಕಟಣೆ.
-
1992 : 62ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷತೆ, ಕೊಪ್ಪಳ