ನಿವೃತ್ತಿ ಹುಕುಂ
- lingannasimpi
- Mar 23, 2021
- 1 min read

ನಿವೃತ್ತಿ ಹೊಸ್ತಿಲನಲ್ಲಿರುವ ಮಾಸ್ತರರೊಬ್ಬರು ತನ್ನ ಹೆಂಡತಿಗೆ 'ನಿವೃತ್ತಿ ಹುಕುಂ' ಎಂದರೆ ಬಾಂಬ್ ಎಸೆದಷ್ಟು ಸ್ಪೋಟಕ ಎಂಬಂತೆ ವರ್ಣಿಸುತ್ತಾ
'ಮಾಸ್ತರರಾಗಿ ಹುಟ್ಟಿದ್ದು ಸಾದಾ ಶಿಕ್ಷೆ; ಮದುವೆಯಾದದ್ದು ಕಠಿಣ ಶಿಕ್ಷೆ; ಮಕ್ಕಳಾದದ್ದು ಕರಿನೀರಿನ ಶಿಕ್ಷೆ; ಪೆನ್ಶನ್ ಆದದ್ದು ಫಾಶಿ ಶಿಕ್ಷೆ ಯಂತೆ
ತಮ್ಮ ಶ್ರೀಮತಿಯವರೊಂದಿಗೆ ಘೋರವಾಗಿ ಸಂಭಾಷಿಸುವ ಸಂದರ್ಭ.
ಇದಕ್ಕೆ ಶ್ರೀಮತಿಯವರು ಕಕ್ಕಾಬಿಕ್ಕಿಯಾಗದೇ ತನ್ನ ಕಳವಳವನ್ನು ಅಷ್ಟೇ ಸಮಾಧಾನದಿಂದ 'ಬೇಡಿಕೆ' ರೂಪದಲ್ಲಿ ಹೊರಹಾಕುತ್ತಾಳೆ.
“ ನೀವು ನಿವೃತ್ತಿ ಹೊಂದಿ ಪರಮಾತ್ಮನ ಧ್ಯಾನದಲ್ಲಿ ನಿಶ್ಚಿಂತೆಯಿಂದ ಇದ್ದುಬಿಡ್ರಿ. ನನ್ನನ್ನು ಮಾತ್ರ ಹೆರಿಗೆಯ ಯಾಂತ್ರಿಕತೆಯಿಂದ ನಿವೃತ್ತಿಗೊಳಿಸಿರಿ"
ಹೀಗೆ ವಿಡಂಬನಾತ್ಮಕವಾಗಿ ಮುಂದುವರಿಯುತ್ತದೆ - ನಿವೃತ್ತಿ ಅಂಚಿನ ಒತ್ತಡದಲ್ಲಿರುವ ಹಳ್ಳಿ ಶಾಲೆಯ ಮಾಸ್ತರರು ಮತ್ತು ಅವರ ಶ್ರೀಮತಿಯವರ ನಡುವಿನ ಕಲಾಪದ ಸಲ್ಲಾಪ!!
ಸಿಂಪಿ ಲಿಂಗಣ್ಣನವರ ಪ್ರಬಂಧ/ ಹರಟೆ ವಿಡಂಬನೆಗಳಲ್ಲಿ ಒಂದಾದ 'ಅಸ್ತವ್ಯಸ್ತ' (1961ರ ಪ್ರಕಟನೆ) ದಲ್ಲಿ ಮೂಡಿ ಬಂದ ಸ್ವಾತಂತ್ರ್ಯೋತ್ತರದ ವಿಕೃತಗೊಂಡ ಹಳ್ಳಿಗಳ ಚಿತ್ರಣಗಳಿವು.
Comments