top of page
Ajja.gif

ಶ್ರೀ ಸಿಂಪಿ ಲಿಂಗಣ್ಣನವರ ಸಾಹಿತ್ಯ

The works of Dr. Simpi Linganna

ಶ್ರೀ ಸಿಂಪಿ ಲಿಂಗಣ್ಣನವರು ವಿಜಯಪುರ ಜಿಲ್ಲೆಯ ಚಡಚಣ ಗ್ರಾಮದಲ್ಲಿ ಬಣಗಾರ ವೀರಶೈವ ಸಮಾಜದ ಬಡಕುಟುಂಬವೊಂದರಲ್ಲಿ ಫೆಬ್ರುವರಿ 11, 1905ರಲ್ಲಿ ಜನಿಸಿದರು. ಇವರ ಪೂರ್ಣ ಹೆಸರು ನಾಗಪ್ಪ ಶಿವಯೋಗಪ್ಪ ಸಿಂಪಿ.ಇವರು ಬಾಲ್ಯದಲ್ಲಿಯೇ ತಾಯಿತಂದೆಗಳನ್ನು ಕಳೆದುಕೊಂಡು ಅಣ್ಣ ಅತ್ತಿಗೆಯರ ಕಣ್ಣರಿಕೆಯಲಿ ಬೆಳೆದುಬಂದರು. 1922ರ ಮುಲ್ಕಿಪರೀಕ್ಷೆ ಪಾಸಾದರು. ವಿಜಯಪುರ ಕೇಂದ್ರಕ್ಕೇ ಪ್ರಥಮ ಸ್ಥಾನಗಳಿಸಿದರು. ಹೆಚ್ಚಿನ ವಿದ್ಯಾಭ್ಯಾಸಕ್ಕೆ ಸೂಕ್ತ ಅವಕಾಶವಿಲ್ಲದ್ದರಿಂದ 1925 ರಲ್ಲಿ ಪ್ರಾಥಮಿಕಶಾಲಾ ಶಿಕ್ಷಕರಾದರು. 1925 ರಿಂದ 1960 ರವರೆಗೆ ಭತಗುಣಕಿ,ಇಂಗಳೇಶ್ವರ,ಹಲಸಂಗಿ,ಇಂಡಿ, ಚಡಚಣಗಳಲ್ಲಿ ಶಿಕ್ಷಕರಾಗಿ ಸೇವೆ ಸಲ್ಲಿಸಿದರು. ಎರಡನೆ ವರ್ಷ ಶಿಕ್ಷಕರ ಟ್ರೈನಿಂಗ್ಪರೀಕ್ಷೆಯಲ್ಲಿ ಮುಂಬೈ ಕರ್ನಾಟಕದ ನಾಲ್ಕೂ ಜಿಲ್ಲೆಗೇ ಪ್ರಥಮ ಸ್ಥಾನ ಪಡೆದು ಹಲವಾರು ಬಹುಮಾನಗಳನ್ನು ಗಳಿಸಿದರು.ವಿದ್ಯಾರ್ಥಿಗಳ, ಪಾಲಕರ,ಅಧಿಕಾರಿಗಳ ಹಾಗೂ ಜನತೆಯ ಪ್ರೀತಿ ವಿಶ್ವಾಸಗಳನ್ನು ಗೆದ್ದುಕೊಂಡು ಶ್ರೀ ಸಿಂಪಿಯವರು 1960ರಲ್ಲಿನಿವೃತ್ತಿಹೊಂದುವ ಪೂರ್ವದಲ್ಲಿ “ಆದರ್ಶಶಿಕ್ಷಕ” ಎಂಬ ಭಾರತ ಸರಕಾರದ ಪ್ರಶಸ್ತಿಯನ್ನು ಗಳಿಸಿಕೊಂಡಿರುವರು.

 

ಶ್ರೀ ಲಿಂಗಣ್ಣ ಅವರದು ಬಹುಮುಖ ಪ್ರತಿಭೆ. ಹಲಸಂಗಿಯ ಮಧುರಚೆನ್ನ, ಕಾಪಸೆ ರೇವಪ್ಪ ಮತ್ತು ಧೂಲಾ ಸಾಹೇಬ ಅವರ ಒಡನಾಟದಲ್ಲಿದ್ದುಕೊಂಡ ಸಾಹಿತ್ಯಕ್ಷೇತ್ರದಲ್ಲಿ ಅಪ್ರತಿಮ ಸೇವೆಸಲ್ಲಿಸಿದ್ದಾರೆ.ಇವರು ಜನಪದ ಸಂಶೋಧಕರು, ಕವಿಗಳು, ಪ್ರಬಂಧಕಾರರು, ಜೀವನಚರಿತ್ರೆಕಾರರು, ನಾಟಕಕಾರರು ಆಗಿದ್ದಾರೆ.ಇವರು ಬರೆದ ಲೇಖನಗಳು ಸಹಸ್ರಾರು, ಪ್ರಕಟಿತ ಗ್ರಂಥಗಳು ನೂರಾರು.ಶ್ರೀಮಾನ್ಯರಿಗೆ ಸಾಮಾನ್ಯರಾಗಿ, ಪಂಡಿತರಿಗೆ ಪಂಡಿತರಾಗಿ, ಆಧ್ಯಾತ್ಮಿಗಳಿಗೆ ಆಧ್ಯಾತ್ಮಿಯಾಗಿ ಕಂಗೊಳಿಸುವ ಸಿಂಪಿಯವರದು ಪರಿಶುದ್ಧ ಬದುಕು.ಅವರ ಬದುಕು ಬರಹ ಕುರಿತುಪ್ರೊ. ಎಂ. ಎನ್. ವಾಲಿಯವರು ಮಹಾಪ್ರಬಂಧವೊಂದನ್ನು ರಚಿಸಿದ್ದು ಅದು ಇತ್ತೀಚೆಗೆ ಪ್ರಕಟವಾಗಿದೆ. ಇವರ ಸ್ವರ್ಗದೋಲೆಗಳು, ಗರತಿಯಬಾಳು, ಜನಾಂಗದಜೀವಾಳ, ಶ್ರುತಾಶ್ರುತ, ನಾಟ್ಯಸಾಧನೆ, ನೂರುಗಡಿಗೆ ಒಂದು ಬಡಿಗೆ ಗ್ರಂಥಗಳಿಗೆ ಕರ್ನಾಟಕ ರಾಜ್ಯ ಸರ್ಕಾರದ ಮತ್ತು ಕರ್ನಾಟಕ ಸಾಹಿತ್ಯ ಅಕಾಡೆಮಿಗಳ ಪ್ರಶಸ್ತಿಗಳು ದೊರೆತಿವೆ.

 

ಶ್ರೀ ಸಿಂಪಿಯವರು ಶ್ರೀ ಅರವಿಂದ ಮಹರ್ಷಿಗಳ ಪರಮಭಕ್ತರು, ಅವರ ಹೆಸರಿನ ಗ್ರಂಥಮಾಲೆಯೊಂದನ್ನು ತೆರೆದು ಹಲವಾರು ಪುಸ್ತಕಗಳನ್ನು ಪ್ರಕಾಶನಗೊಳಿಸಿ, ಅಧ್ಯಾತ್ಮ ಸಾಹಿತ್ಯ ಪ್ರವರ್ತಕ ಎಂಬ ಪ್ರಶಸ್ತಿಯನ್ನು ಗಳಿಸಿದ್ದಾರೆ. ಹಲಸಂಗಿ-ಗೆಳೆಯರಗುಂಪಿನ ಸದಸ್ಯರಲ್ಲೊಬ್ಬರಾಗಿ ಗರತಿಯಹಾಡು, ಮಲ್ಲಿಗೆದಂಡೆ ಹಾಗೂ ಜೀವನ ಸಂಗೀತ ಮೊದಲಾದ ಉತ್ರ್ಕುಷ್ಠವಾದ, ಮೌಲಿಕವಾದ ಜನಪದ ಸಂಕಲನಗಳನ್ನು ಹೊರತಂದದ್ದು ಜಾನಪದ ಸಂಶೋಧನೆಯ ಮೈಲುಗಲ್ಲಾಗಿದೆ.

Home: Welcome
ಕರಿಯಂಗಿ ಕಸೂತಿ, ತಲೆತುಂಬ ಜಾವೂಳ|
ಅಂಗಳದಾಗ ನವಿಲಾಟ|
ಲಿಂಗಯ್ಯನಾಟ ವಿಪರೀತ|

CONTACT

Thank you for visiting Dr. Simpi Linganna's official Author Portfolio.
For more information, please get in touch - .

Sri Aravind Granthalaya

Chadachan - 586205 Dist: Bijapur
Call/WhatsApp: 8762633669

Thank you for submitting!

Home: Quote
Home: Contact
Home: Blog Feed

©2021 by Dr. Simpi Linganna. Proudly created with Wix.com

bottom of page