top of page

ಸಿಂಪಿ ಲಿಂಗಣ್ಣನವರ ಜೀವನದ ಪ್ರಮುಖ ಘಟನಾವಳಿ

Significant Life Events

1905 :  ಜನನ - ಚಡಚಣ, ತಾಲೂಕು ಇಂಡಿ ವಿಜಯಪುರ ಜಿಲ್ಲೆ, ಫೆಬ್ರವರಿ 11 
1907 :  ತಾಯಿ ಸಾವಿತ್ರಿಯವರ ಮರಣ.

1911 :  ಪ್ರಾಥಮಿಕ ಶಾಲೆ ಸೇರಿದುದು.

1913 : ಮಧುರಚೆನ್ನರನ್ನು ಮೊಟ್ಟ ಮೊದಲು ಚಡಚಣದಲ್ಲಿ ಕಂಡದ್ದು.

1917 : ತಂದೆ ಶಿವಯೋಗಿಯವರ ಮರಣ.

1922 :  ಮುಲ್ಕಿ ಪರೀಕ್ಷೆಯಲ್ಲಿ ಜಿಲ್ಲೆಗೆ ಮೊದಲು ನಂಬರ ಗಳಿಸಿ ಉತ್ತೀರ್ಣರಾದುದು.

1924 : ಧಾರವಾಡ ಟ್ರೇನಿಂಗ ಸ್ಕೂಲಿಗೆ ಪ್ರಥಮ ವರ್ಷದ ಶಿಕ್ಷಕ ವಿದ್ಯಾರ್ಥಿಯಾಗಿ ಸೇರ್ಪಡೆ.

1925 : ಭತಗುಣಕಿಯಲ್ಲಿ 'ಬಸವೇಶ್ವರ ವಾಚನಾಲಯ' ಸ್ಥಾಪನೆ. ತರುಣರಿಗೆ  `ಪಾದುಕಾ ಪಟ್ಟಾಭಿಷೇಕ' ನಾಟಕ ಕಲಿಸಲು ಸಹಾಯ. ವಿದ್ಯಾರ್ಥಿಗಳಿಂದ 'ಕಮತಿಗ' ಕೈಬರಹದ ವಾರಪತ್ರಿಕೆ ಆರಂಭ. ದಿ. ಮಂಗಳವೇಡ ಶ್ರೀನಿವಾಸರಾಯರ 'ಕನ್ನಡಿಗ' ವಾರಪತ್ರಿಕೆಗೆ ಸುದ್ದಿಗಾರರಾದುದು. 

1928 : ಮದು'ಜನಜೀವನ ನಾಟಕ' ಬರೆದು ಮಕ್ಕಳಿಂದ ಹಲವು ಕಡೆ ಆಡಿಸಿ ಪ್ರಶಸ್ತಿ ಪಡೆದದ್ದು.

1930 : ಚಡಚಣದಲ್ಲಿ ರೈತ ಸಂಘ, ಖಾದಿ ಕೇಂದ್ರಗಳನ್ನು ಸ್ಥಾಪಿಸಿ ಅಸಹಕಾರ ಅಂದೋಲನಕ್ಕೆ ಬೆಂಬಲ ನೀಡಿದುದು, ಅವರ ಅಣ್ಣನ ಆಕಾಲಿಕ ಮರಣ, ಇಂಗಳೇಶ್ವರಕ್ಕೆ ವರ್ಗ,

1932 : ಹಲಸಂಗಿ (ತಾಲೂಕ ಇಂಡಿ) ಮುಖ್ಯಾಧ್ಯಾಪಕರಾದುದು,  ಶಾಲೆಯ ಗಣೇಶೋತ್ಸವದ ಸಾಂಸ್ಕೃತಿಕ ಕಾರ್ಯಕ್ರಮ ಆರಂಭ.

1936 : ಶ್ರೀ ರಾಮಕೃಷ್ಣ ಪರಮಹಂಸರ ಶತಮಾನೋತ್ಸವ, ಅರವಿಂದ ಗ್ರಂಥಮಾಲೆ, ಕೈಬರಹದ 'ಅಭ್ಯುದಯ' ವಾರಪತ್ರಿಕೆ ಆರಂಭ,  'ಕನ್ನಡಿಗರ ಕುಲಗುರು' - ಕೃತಿಯ 200 ಪ್ರತಿಗಳನ್ನು ಹಂಪೆಯಲ್ಲಿ ಹಂಚಿದುದು. ಬರವಣಿಗೆಯಲ್ಲಿ ಊರ್ಧ್ವಶಕ್ತಿಯ ಬಳಕೆಗೆ ಪ್ರಾರಂಭ.

1941 : ಟ್ರೈನಿಂಗ್ ಕಾಲೇಜಿನ 2ನೆಯ ವರ್ಷಕ್ಕಾಗಿ ಆಯ್ಕೆ, ಮುರುಘಾ ಮಠದ ಆಶುಕವಿತಾ ಸ್ಪರ್ಧೆಯಲ್ಲಿ ಪ್ರಥಮ ಬಹುಮಾನ, ಟೌನಹಾಲಿನ ಆರೋಧಕ ಭಾಷಣ, ಟ್ರೈನಿಂಗ್ ಕಾಲೇಜಿನ ವಾರ್ಷಿಕ ಪರೀಕ್ಷೆಯ ನಾಲ್ಕು ಪ್ರಥಮ ಬಹುಮಾನ ವಡೆದು ನಾಲ್ಕೂ ಜಿಲ್ಲೆಗೆ ಪ್ರಥದರೆಂದು ಉತ್ತೀರ್ಣರಾಗಿ ದಾಖಲೆ ಸ್ಥಾಪಿಸಿದ್ದು.

1942 : ಇಂಡಿ ಶಾಲೆಯ ಶಿಕ್ಷಕರಾಗಿ ನೇಮಕ, ಪ್ರಥಮ ಸಲ ಪಾಂಡಿಚೇರಿಯ ಶ್ರೀ ಮಾತಾರವಿಂದರ ದರ್ಶನ ಪಡೆದುದು, ಅಗಸ್ಟ ೧೫

1943 : ಹಲಸಂಗಿ ಶಾಲೆಗೆ ಪುನಃ ವರ್ಗವಾಗಿ ಬಂದುದು.

1944 : ರಬಕವಿಯಲ್ಲಿ ಜರುಗಿದ ೨೮ನೆಯ ಕನ್ನಡ ಸಾಹಿತ್ಯ ಸಮ್ಮೇಲನ ಜನಪದ ಸಾಹಿತ್ಯ ಗೋಷ್ಠಿಯ ಅಧ್ಯಕ್ಷತೆ. 

1947 : ಪತ್ನಿಯವರಾವ 'ಸುಲಭಾ' (ಸೊಲಬವ್ವ) ಅವರ ಅಗಲಿಕೆ.

1948 :  ಶ್ರೀಮತಿ ಶಿವಮ್ಮ ಅವರೊಡನೆ ಪುನರ್ವಿವಾಹ.

1949 : ಸಮಾಜ ಶಿಕ್ಷಣದ ವಿಶೇಷಾಧಿಕಾರಿಗಳೆಂದು ಇಂಡಿ ಭಾಗದಲ್ಲಿ ಕಾರ್ಯ ನಿರ್ವಹಣೆ.

1950 : ಚಡಚಣ ಶಾಲೆಯ ಮುಖ್ಯಾಧ್ಯಾಪಕರಾಗಿ ಮರಳಿ ಬಂದುದು.

1955 : ವಿಜಾಪುರದಲ್ಲಿ 'ಅಧ್ಯಾತ್ಮ ಸಾಹಿತ್ಯ ಪ್ರವರ್ತಕ'ರೆಂಬ ಬಿರುದು.

1960 : ರಾಷ್ಟ್ರಪತಿ ಬಾಬುರಾಜೇಂದ್ರ ಪ್ರಸಾದರಿಂದ ಆದರ್ಶ ಶಿಕ್ಷಕ ಪ್ರಶಸ್ತಿ ಜನವರಿ 26. 
ಚಡಚಣ ನಾಗರಿಕರಿಂದ ಸತ್ಕಾರ ಫೆಬ್ರುವರಿ 14.

ಶ್ರೀ ಅರವಿಂದ ಗ್ರಂಥಾಲಯ, ಚಡಚಣ- ಈ ಪ್ರಕಟನಾ ಸಂಸ್ಥೆಯಿಂದ ಹಲವು ಕೃತಿಗಳ ಪ್ರಕಟನೆಯ ಸಂಕಲ್ಪ.

1966 : ಮೈಸೂರು ವಿಶ್ವವಿದ್ಯಾಲಯ ಏರ್ಪಡಿಸಿದ ಕನ್ನಡ ಲೇಖಕರ ಸಮ್ಮೇಲನದಲ್ಲಿ ಜನಪದ ಗೋಷ್ಠಿಯ ಅಧ್ಯಕ್ಷತೆ, ಡಿಶಂಬರ ೮.

1968  ಕರ್ನಾಟಕ ರಾಜ್ಯ ಸಾಹಿತ್ಯ ಅಕಾಡೆಮಿಯ ಪ್ರಶಸ್ತಿ ದೊರೆತದ್ದು

1969 : ಮಂಗಳೂರಿನಲ್ಲಿ  ನಡೆದ ೨ನೆಯ ಜಾನಪದ ಸಮ್ಮೇಲನದ ಅಧ್ಯಕ್ಷರಾದುದು ಫೆಬ್ರುವರಿ 3,4 ಮತ್ತು 5

1972 : ವಿಜಾಪುರ ಜಿಲ್ಲಾ ಪ್ರಥಮ ಸಾಹಿತ್ಯ ಸಮ್ಮೇಲನದಲ್ಲಿ ಸನ್ಮಾನ, ಜನವರಿ 24, 25, 26

1976 : ಸಾಗರದಲ್ಲಿ ರಾಜ್ಯಮಟ್ಟದ  ಜಾನಪದ ಸಾಹಿತ್ಯೋತ್ಸವದ ಮುಖ್ಯ ಆತಿಥಿ. ಕರ್ನಾಟಕ ಸರಕಾರದಿಂದ ಸಾಹಿತಿಗೆ ಸಲ್ಲುವ, ಪ್ರತಿ ತಿಂಗಳಿಗೆ ೫೦೦ ರೂ. ಗಳ ಗೌರವಧನ

1979 : ಇಲಕಲ್ಲಿನಲ್ಲಿ ಜರುಗಿದ ಅಖಿಲ ಕರ್ನಾಟಕ ಆರನೆಯ ಜಾನಪದ ಸಾಹಿತ್ಯ ಸಮ್ಮೇಲನದ ಅಧ್ಯಕ್ಷರಾದುದು.

1980 : ಜಮಖಂಡಿಯಲ್ಲಿ ಜರುಗಿದ ವಿಜಾಪುರ ಜಿಲ್ಲಾ ದ್ವಿತೀಯ ಕನ್ನಡ ಸಾಹಿತ್ಯ ಸಮ್ಮೇಲನದ ಅಧ್ಯಕ್ಷತೆ, ಚಡಚಣ ಕಾಲೇಜದಿಂದ ಸನ್ಮಾನ ಪತ್ರ ಸಮರ್ಪಣೆ, ಮಾರ್ಚ 14

ಕರ್ನಾಟಕ ಜಾನಪದ ಟ್ರಸ್ಟಿನ ಮೊದಲು ಹುಟ್ಟುಹಬ್ಬದಲ್ಲಿ ಬೆಂಗಳೂರಿ ನಲ್ಲಿ ಸನ್ಮಾನ, ಅಕ್ಟೋಬರ ೨.

1989 : ಗುಲಬರ್ಗಾ ವಿಶ್ವವಿದ್ಯಾಲಯವು ಇವರಿಗೆ ಗೌರವ ಡಾಕ್ಟರೇಟ ಪದವಿ ಯನ್ನು ನೀಡಿತು. ಫೆಬ್ರುವರಿ 26.

1990 : ಕನ್ನಡ ಸಾಹಿತ್ಯ ಪರಿಷತ್ತಿನ "ಗೌರವ ಸದಸ್ಯತ್ವ" ಪಡೆದದು, ಅಕ್ಟೋಬರ 6

1990 :  ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ದೊರೆತುದು, ನವೆಂಬರ 1

©2021 by Dr. Simpi Linganna. Proudly created with Wix.com

bottom of page