ಗರತಿಯ ದಿಟ್ಟಿಸಿ ನೋಡಿದರೆ!
- lingannasimpi
- Mar 4, 2021
- 1 min read

ಸಿಂಪಿ ಲಿಂಗಣ್ಣ ಅವರದ್ದೇ ಈ ಚಿತ್ರವೇ?
ಹೌದು, ಈ ಚಿತ್ರದಲ್ಲಿ ಸೆರೆಯಾಗಿರುವವರೇ ಸಿಂಪಿ ಲಿಂಗಣ್ಣನವರು. ಇದರ ಹಿಂದಿನ ಸ್ವಾರಸ್ಯಕರ ಸಂಗತಿ
1912 ರಲ್ಲಿ ತೀರ ಚಿಕ್ಕವನಿದ್ದಾಗ ಚಡಚಣದಲ್ಲಿ 'ಮಧುರ ಚೆನ್ನ' ರನ್ನು ಕಂಡ ಇವರಿಗೆ ಚೆನ್ನಮಲ್ಲಪ್ಪನವರ ಸಾನಿಧ್ಯ ಮರುಧರೆಗೆ ಮಳೆ ಹುಯ್ದಂತಾಯಿತು. ಮಧುರಚೆನ್ನರ ಸಾನಿಧ್ಯದಲ್ಲಿ ಲಿಂಗಣ್ಣನವರ ಬದುಕು ಮತ್ತು ಬರಹ ಎರಡೂ ಹೊಸ ಆಯಾಮ ಸೃಷ್ಠಿಗೊಂಡವು. ಸಿಂಪಿ ಲಿಂಗಣ್ಣನವರ ಸೇವಾವಧಿಯ ಬಹು ದಿನಗಳನ್ನು ಅವರು ಹಲಸಂಗಿಯಲ್ಲಿ ಕಳೆದಿದ್ದಾರೆ. ಮಧುರಚೆನ್ನ, ರೇವಪ್ಪ ಕಾಪಸೆ, ಪಿ.ಧೂಲಾಸಾಹೇಬ ಇವರ ಸಂಗ ಒಂದು ಸಂಸ್ಥೆಯಾಗಿ ಬೆಳೆದು ' ಹಲಸಂಗಿ ಗೆಳೆಯರ ಬಳಗ' ವಾಗಿ ಕನ್ನಾಡಿಗುಂಟಾ ಜನಪದ ಸಾಹಿತ್ಯದ ಕಂಪು ಹರಡಿ, ಸಂಚಲನೆ ಮೂಡಿಸಿದ್ದು ಈಗ ಚರಿತ್ರೆ. ಅದರ ಸಾರಥ್ಯವಹಿಸಿದವರು ಮಧುರಚೆನ್ನರು. ಅವರೊಡಗೂಡಿ ಕನ್ನಡ ಜನಪದ ಗೀತೆಗಳ ಅದ್ವೀತಿಯ ಸಂಗ್ರಹಗಳೆನಿಸಿದ ಗರತಿಯ ಹಾಡು(1931) , ಜೀವನ ಸಂಗೀತ(1933) ಹಾಗೂ ಮಲ್ಲಿಗೆ ದಂಡೆ(1935) ಯನ್ನು ಪ್ರಕಟಣೆಗೊಳಿಸುವಲ್ಲಿ ತಮ್ಮನ್ನು ತೊಡಗಿಸಿಕೊಂಡರು.
'ಗರತಿಯ ಹಾಡು' ಸಂಕಲನ ಅಂದವಾದ ಹೆಣ್ಣಿನ ಚಿತ್ರದ ಮುಖಪುಟದೊಂದಿಗೆ ಮುದ್ರಿಣ ಗೊಂಡಿತು. 'ಮಲ್ಲಿಗೆ ದಂಡೆ' ಕವನ ಸಂಕಲನಕ್ಕೊಸುಗ ಸಿಂಪಿ ಲಿಂಗಣ್ಣನವರು ಮುಖಪುಟದ ಸೊಬಗು ತುಂಬುವ ದಿಸೆಯಲ್ಲಿ ಅವರು ಗರತಿಯ ಪಾತ್ರ ಧಾರಣೆ. ಅದಕ್ಕಾಗಿ ಸೊಲ್ಲಾಪುರದಿಂದ ಮಲ್ಲಿಗೆದಂಡೆ ತರಿಸಿ, ಶ್ರೀಮಂತರೊಬ್ಬರ ಮನೆಗೆ ಎಡತಾಕಿ ಸಾವಿರ ರೂಪಾಯಿ ಬೆಲೆ ಬಾಳುವ ಸೀರೆ ಕಡವಾಗಿ ಪಡೆದು, ಗರತಿಯ ಹಾಗೆ ಸಿಂಗರಿಸಿ ಕುಳಿತುಕೊಂಡು ಕ್ಲಿಕ್ಕಿಸಿಗೊಂಡ ಫೋಟೋ ಅದು. ಏಳಸಂಗ ಗ್ರಾಮದ ಮಾವಿನಹಳ್ಳಿ ಎಂಬವರು ತೆಗೆದ ಫೋಟೋ.
ಇಂತಹ ಆಕರ್ಷಕವಾದ ಫೋಟೋವನ್ನು 'ಮಲ್ಲಿಗೆ ದಂಡೆ' ಯ ಮುಖಪುಟವನ್ನಾಗಿಸುವ ಯೋಜನೆಯನ್ನು ಕೈಬಿಡಲಾಯಿತು.
ಇದೇ ಫೋಟೋ ಮುಂದಿನ ದಿನಗಳಲ್ಲಿ 'ದಿಟ್ಟಿಸಿ ನೋಡಿದರೆ' ಎಂಬ ಪ್ರಬಂಧ ಸಂಕಲನದ
ಬೆನ್ನು ಪುಟ(cover page) ವಾಗಿ ಗಮನಸೆಳೆಯಿತು.
Kommentare